फेस बुक मित्र Brahma Dev Sharma जी की कविता का कन्नड अनुवाद प्रस्तुत कर रही हूँ।
ಫೇಸ್ ಬುಕ್ ಸ್ನೇಹಿತರು Brahma Dev Sharma ಅವರ ಹಿಂದೀ ಕವಿತೆಗೆ ನನ್ನ ಕನ್ನಡ ಅನುವಾದ.
हिन्दी मूल - Brahma Dev Sharma
ಕನ್ನಡ ಅನುವಾದ -ಬುಸಿರಾಜು ಲಕ್ಷ್ಮೀದೇವಿ ದೇಶಾಯಿ.
ಮಳೆಯರಸಿ!
ನನಗೆ ನೀನು ತುಂಬಾ ಇಷ್ಟ
ನಿನ್ನ ಕಂಡರೆ ನನಗೆ ತುಂಬಾ ಇಷ್ಟ
ಕರಿಮೋಡದ ರೂಪದಲ್ಲಿರುವೆ
ಎಡೆಬಿಡದೆ ಸುರಿಯುವುದಕ್ಕೆ ಸಿದ್ಧವಾಗಿರುವೆ
ಹನಿ ಹನಿಯಾಗಿ ಇಳಿಯುತ್ತಾ
ತಾಪವ ತಣಿಸುವೆ
ನನ್ನದೊಂದು ಬಿನ್ನಹ!
ಎಲ್ಲೆಲ್ಲಿ ನಿನ್ನ ಮೌಲ್ಯ ತಿಳಿಯುವುದೋ,
ಎಲ್ಲೆಲ್ಲಿ ಇರುವಜನ ಒಂದೊಂದು ಹನಿಯ ಬೆಲೆ ತಿಳಿಯಬಲ್ಲರೋ
ಎಲ್ಲೆಲ್ಲಿ ನಿನ್ನನ್ನೇ ತಮ್ಮ ಬದುಕಾಗಿ ನಂಬಿರುವವರೋ,
ಅಲ್ಲಲ್ಲಿ ಸುರಿಯುವಂತೆ ನನ್ನ ಬಿನ್ನಹ.
ಗದ್ದೆಗಳಲ್ಲಿ, ತೋಟಗಳಲ್ಲಿ,
ಗುಡ್ಡದಮೇಲೆ, ಉಪವನದಲ್ಲಿ
ದೂರದೂರದ ಬಯಲುಭೂಮಿಗಳಲ್ಲಿ,
ಕಾನನದಲ್ಲಿ, ಮರುಭೂಮಿಯಲಿ,
ಸುರಿಯುತ್ತಿರು ನೀನು.
ಸಿಹಿಯಾದ ತೀರ್ಥ ತುಂಬಿದ ಹೊನಲಾಗಿ,
ದಾಹಾರ್ತಿ ನೀಗಿಸುತ್ತಾ,
ಸುಂದರ ಜಲಪಾತವಾಗಿ
ನಿಸರ್ಗದ ಕಳೆಯದ ವಾತ್ಸಲ್ಯವಾಗಿ
ಸುರಿಯುತ್ತಿರು ನೀನು
ಮಳೆಯರಸಿ!
ನೀನು ಚರಂಡಿ ಯಲ್ಲಿ ಹರಿಯುವುದು ನಾ ತಾಳಲಾರೆ.
-=--
ಫೇಸ್ ಬುಕ್ ಸ್ನೇಹಿತರು Brahma Dev Sharma ಅವರ ಹಿಂದೀ ಕವಿತೆಗೆ ನನ್ನ ಕನ್ನಡ ಅನುವಾದ.
हिन्दी मूल - Brahma Dev Sharma
ಕನ್ನಡ ಅನುವಾದ -ಬುಸಿರಾಜು ಲಕ್ಷ್ಮೀದೇವಿ ದೇಶಾಯಿ.
ಮಳೆಯರಸಿ!
ನನಗೆ ನೀನು ತುಂಬಾ ಇಷ್ಟ
ನಿನ್ನ ಕಂಡರೆ ನನಗೆ ತುಂಬಾ ಇಷ್ಟ
ಕರಿಮೋಡದ ರೂಪದಲ್ಲಿರುವೆ
ಎಡೆಬಿಡದೆ ಸುರಿಯುವುದಕ್ಕೆ ಸಿದ್ಧವಾಗಿರುವೆ
ಹನಿ ಹನಿಯಾಗಿ ಇಳಿಯುತ್ತಾ
ತಾಪವ ತಣಿಸುವೆ
ನನ್ನದೊಂದು ಬಿನ್ನಹ!
ಎಲ್ಲೆಲ್ಲಿ ನಿನ್ನ ಮೌಲ್ಯ ತಿಳಿಯುವುದೋ,
ಎಲ್ಲೆಲ್ಲಿ ಇರುವಜನ ಒಂದೊಂದು ಹನಿಯ ಬೆಲೆ ತಿಳಿಯಬಲ್ಲರೋ
ಎಲ್ಲೆಲ್ಲಿ ನಿನ್ನನ್ನೇ ತಮ್ಮ ಬದುಕಾಗಿ ನಂಬಿರುವವರೋ,
ಅಲ್ಲಲ್ಲಿ ಸುರಿಯುವಂತೆ ನನ್ನ ಬಿನ್ನಹ.
ಗದ್ದೆಗಳಲ್ಲಿ, ತೋಟಗಳಲ್ಲಿ,
ಗುಡ್ಡದಮೇಲೆ, ಉಪವನದಲ್ಲಿ
ದೂರದೂರದ ಬಯಲುಭೂಮಿಗಳಲ್ಲಿ,
ಕಾನನದಲ್ಲಿ, ಮರುಭೂಮಿಯಲಿ,
ಸುರಿಯುತ್ತಿರು ನೀನು.
ಸಿಹಿಯಾದ ತೀರ್ಥ ತುಂಬಿದ ಹೊನಲಾಗಿ,
ದಾಹಾರ್ತಿ ನೀಗಿಸುತ್ತಾ,
ಸುಂದರ ಜಲಪಾತವಾಗಿ
ನಿಸರ್ಗದ ಕಳೆಯದ ವಾತ್ಸಲ್ಯವಾಗಿ
ಸುರಿಯುತ್ತಿರು ನೀನು
ಮಳೆಯರಸಿ!
ನೀನು ಚರಂಡಿ ಯಲ್ಲಿ ಹರಿಯುವುದು ನಾ ತಾಳಲಾರೆ.
-=--
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.