ಈ ಬ್ಲಾಗ್ ಅನ್ನು ಹುಡುಕಿ

ನವರತ್ನಗಳ ಕೃತಿ

 ಅನ್ನಮಾಚಾರ್ಯರ ಸುಪ್ರಸಿದ್ಧ ಕೃತಿ - ಮುದ್ದುಗಾರೇ ಯಶೋದ ಮುಂಗಿಟಿ ಮುತ್ಯಮು ವೀಡು . ಕನ್ನಡದಲ್ಲಿ ಅನುವಾದ ಮಾಡಲು ಪ್ರಯತ್ನ ಮಾಡಿದ್ದೀನಿ.


-

ಮುದ್ದು ಕೃಷ್ಣ ಯಶೋದೆಯ ಅಂಗಣದ ಮುತ್ತು ಇವನು

ಸುದ್ದಿ ಯಾಗು ಮಹಿಮೆಯ ದೇವಕೀಸುತನು

ಮುದ್ದು ಕೃಷ್ಣ ಯಶೋದೆಯ ಅಂಗಣದ ಮುತ್ತು ಇವನು

ಸುದ್ದಿ ಯಾಗು ಮಹಿಮೆಯ ದೇವಕೀಸುತನು


ಅರಿಯಾದ ಗೋಪಿಯರ ಅಂಗೈಯ ಮಾಣಿಕ್ಯವು

ವಂಚಕ ಕಂಸ ಕೊಂದ ವಜ್ರ ವಿವನು

ಹೊಳೆಯುತ ಮೂರು ಲೋಕದ ಗರುಡ ಪಚ್ಚವಿವನು

ನಟ್ಟಿಗೆ ನಮ್ಮಲ್ಲಿದ್ದ ನಮ್ಮ ಕೃಷ್ಣನು

 ಮುದ್ದು ಕೃಷ್ಣ ಯಶೋದೆಯ….


ರತಿಕೇಳಿ ರುಕ್ಮಿಣಿಯ ತುಟಿ ಬಣ್ಣದ ಹವಳವಿವನು

ನತ ಗೋವರ್ಧನದ ಗೋಮೇಧಿಕವು

ಸತತ ಶಂಖು ಚಕ್ರದ ಸಂದಿನ ವೈಡೂರ್ಯವು

ಗತಿಯೇ ತಾನಾಗಿಹ ಕಮಲಾಕ್ಷನು

ಮುದ್ದು ಕೃಷ್ಣ ಯಶೋದೆಯ..


ಕಾಳಿಂದಿಯ ಫಣಿಯ ಮೇಲೆ ಕಾಣುವ ಪುಷ್ಯರಾಗವು

ಇಂತಿಂಥಾ ವೇಂಕಟಾದ್ರಿ ಇಂದ್ರನೀಲವು

ಕ್ಷೀರಜಲನಿಧಿ ಯಲ್ಲಿ ಸಿಗುವಂತ ದಿವ್ಯರತ್ನವು

ಬಾಲಕ ನಂತೆ ಅಲೆಯು ಪದ್ಮನಾಭನು

ಮುದ್ದು ಕೃಷ್ಣ


ಯಶೋದೆಯ….


-ಲಕ್ಷ್ಮೀದೇವಿ.


ಲಾಲಿ ಹಾಡು

 ಜೋಲಾಲಿ ಹಾಡುವೆನು ತೂಗುವೆನು ತೊಟ್ಟಿಲನ

ಮಲಗಯ್ಯ ಮಾರಾಯ ಜೋ ಜೋ ಜೋ ।

ಜೋ ಜೋ ಜೋ ।


ಮನೆಯೆಲ್ಲ ಬೆಳಗಿಸುತ ನಗುನಗುತ ಇರು ಕಂದ ಜೋ ಜೋ ಜೋ

ಮನದಲ್ಲಿ ಸುಖಶಾಂತಿ ಚಿರಕಾಲ ನಿಂತಿರಲಿ ಜೋ ಜೋ ಜೋ


ಜೋ ಲಾಲಿ ಹಾಡುವೆನು ತೂಗುವೆನು ತೊಟ್ಟಿಲನ

ಮಲಗಯ್ಯ ಮಾರಾಯ ಜೋ ಜೋ ಜೋ ।

ಜೋ ಜೋ ಜೋ ।


ಮಡಿಲಲ್ಲಿ ಮಲಗಿಸುವೆ ಮುದ್ದಾದ ನನ ಕಂದ ಜೋ ಜೋ ಜೋ

ಕಣ್ಣಲ್ಲಿ ಕನಸುಗಳ ವರಮಾಲೆ ಕಾಯುತಿದೆ ಜೋ ಜೋ ಜೋ


ಜೋಲಾಲಿ ಹಾಡುವೆನು ತೂಗುವೆನು ತೊಟ್ಟಿಲನ

ಮಲಗಯ್ಯ ಮಾರಾಯ ಜೋ ಜೋ ಜೋ ।

ಜೋ ಜೋ ಜೋ ।


--ಲಕ್ಷ್ಮೀದೇವಿ.

Tekkalakota - photoes and details.

ತೆಕ್ಕಲಕೋಟೆ ವರವಿನ ಮಲ್ಲಪ್ಪ ದೇವಸ್ಥಾನ.

ಸುಣ್ಣ ಹಚ್ಚಿದ ಗುಡಿಗೆ , ಪಕ್ಕದ ಮಂಟಪಗಳಿಗೆ ನಡುವೆ ಹಾದಿ.

ಜೊತೆ ಜೊತೆಯಲಿ

ಹಸಿರೆಲೆ ನೆಲಸಿದ ಊದಾ ಬಣ್ಣದ
ಕುಸುಮನು ಕಾಣಲು ಅಂದ ಚಂದ
ಜೊತೆಜೊತೆ ಕಟ್ಟಿದ ಪದಗಳ ಧಾರೆಯು
ಚತುರತೆ ಹೊಳೆಯುವ ಮುತ್ತಿನ ಹಾರವು