ಈ ಬ್ಲಾಗ್ ಅನ್ನು ಹುಡುಕಿ

ನೀರನ್ನು ಕಂಡಾಗ ಅದೆಷ್ಟು ಸಂತೋಷವೋ!



                      ನೀರನ್ನು ಕಂಡಾಗ ಅದೆಷ್ಟು ಸಂತೋಷವೋ! ದೊಡ್ಡವರೆಲ್ಲರು ಹುಡುಗುರಾಗಿಬಿಡುತ್ತಾರೆ. ಎಲ್ಲರ ಮಾರಿಗಳು ಹೂವಿನಂತೆ ಅರಳುತ್ತಾವೆ.
ಇನ್ನ ನೀರಲ್ಲಿ ಒಂದು ಪ್ರಯಾಣವೆಂದರೆ ಆ ಉತ್ಸಾಹಕ್ಕೆ ಮಿತಿ ಯಿರುವದಿಲ್ಲ. ಎಷ್ಟು ಹೊತ್ತು ನೋಡುತ್ತಿದ್ದರೂ ಮನವು ತುಂಬಲ್ಲ.
ಕಣ್ಣು ತುಂಬಿಸಿಕೊಂತಾ ಹೋಗಬೇಕು. ಕೆಮೆರಾದಲ್ಲಿ ಫೋಟೋ ತುಂಬಿಸಿಕೊಂತಾ ಹೋಗಬೇಕಷ್ಟೆ.

           ಈ ಕೆರೆ ಅಹ್ಮದಾಬಾದ್ (ಕರ್ಣಾವತಿ) ಯಲ್ಲಿರುವದು. ಅದರ ಸುತ್ತುಮುತ್ತೆಲ್ಲ ಹುಡಗರಿಗೆ , ದೊಡ್ಡವರಿಗೆ ಬೇಕಾದಷ್ಟು ಕಾಲಕ್ಷೇಪದ ಆಟಗಳು, ತಿಂಡಿತೀರ್ಥ ಗಳು, ನೀರು ಮೊದಲಾದ ವ್ಯವಸ್ಥೆಯೂ ಇದೆ. ಬೇಗ ನೋಡಿಕೊಂಡು ಬರೋಣ ಅಂದರೇನೇ ನಾಲ್ಕುಗಂಟಿ ಕಾಲ ಇಡಿದಿದೆ.
ಸಾವಕಾಶ ವಾಗಿ ಆ ನೀರನ ಮುಂದೆ ನಿಂತರೆ ಅದೆಷ್ಟು ಆನಂದವೋ!! 


           








              ಸಾಯಂಕಾಲ ವಾದರೆ ಕೆರೆಯ ಸುತ್ತಲೂ ಬಣ್ಣಬಣ್ಣದ ವಿದ್ಯುದ್ದೀಪಗಳ ಬೆಳಕು! ಆ ಬೆಳಕುನ ಹಲವಾರು ಬಣ್ಣ ಚಿತ್ರಗಳು ನೀರಿನಲ್ಲಿ ರಂಗೋಲಿ ಹಾಕುತ್ತಿದ್ದಲ್ಲಿ ನೋಡಲು ಎರಡು ಕಣ್ಣು ಸಾಲದು.




            








                      ನಮ್ಮ ಸುತ್ತುಮುತ್ತು ಪ್ರದೇಶಗಳಲ್ಲಿಯೇ ಎಷ್ಟು ಅಂದ ಛಂದವಿದೆ! ಇದನ್ನು ಸರಿಯಾಗಿ ಬಳಸಿಕೊಂಡು , ಬೆಳಸಿಕೊಂಡು ಹೋಗಬೇಕಲ್ಲಾ ಅಂತ ಯಾರೇ ಇರಲಿ ನಿಟ್ಟುಸುರು ಬಿಡುತ್ತಾರೆ. ಮಾಡುಬೇಕನ್ನುವ ಆಶೆ ಇದ್ದವರ ಸಂಖ್ಯ ಜಾಸ್ತಿ. ಮಾಡುವವರ ಸಂಖ್ಯ ನಾಸ್ತಿ.

                ನಮ್ಮಗಿಂತಲೂ ಆಗಿನ ಕಾಲದ ರಾಜ ಮಹರಾಜಗಳಿಗೆ ಸೌಂದರ್ಯ ದೃಷ್ಟಿ ತುಂಬಾನೇ ಇದೆ ಅನುಸುತ್ತದೆ. ಅಲ್ಲೇ ತೀರದಲ್ಲಿ ಒಂದು ಮಹಲು ಮಂಟಪ ಇದೆ. ಅಲ್ಲಿ ಕೂತ್ಕೊಂಡು ಆ ನಿಸರ್ಗ ಸೌಂದರ್ಯವನ್ನು ನೋಡುತ್ತಾ ಕೂಡಲು ಕಟ್ಟಿಸಿರಬೇಕು.


                  
















              ಮತ್ತು ಎಷ್ಟು ಮಳೆ ಬಂದರೂ ಜಲಪ್ರವಾಹ (floods) ಬರದೆ ಇರಲು ಒಂದು ಹತ್ತಡಿ ಗೋಡೆ ಕಟ್ಟಿಸಿ ಅದರಮೇಲೆ ಉಬ್ಬಿಬಂದಂತೆ ಹಲವಾರು ಗೊಂಬಿ, ಘಟನೆಯಗಳನ್ನ ಬರದಿದ್ದಾರೆ.




            



            ನೋಡಿದವರೆಲ್ಲರು ಸಂತೋಷ ದಿಂದ, ಆನಂದದಿಂದ ಹಿಂದಿರುಗುತ್ತಾರೆ ಅಂತ ನಂಬಿಕೆ ಯಿಂದ ಹೇಳಬಹದು.
                ---ಲಕ್ಷ್ಮೀದೇವಿ.







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.