ನಾಟಕ ಪ್ರದರ್ಶನಗಳು ಕಡಿಮೆ ಯಾಗಿ ಹಲವಾರು ವರ್ಷಗಳಾದವು. ಬರಿಯುವವರೂ ಐತಿಹಾಸಿಕ ನಾಟಕಗಳು ಬರಿಯುವದಿಲ್ಲ.
ನಾಟ್ಯಕಳಾಪ್ರಪೂರ್ಣ ಬಳ್ಳಾರಿ ರಾಘವಾಚಾರ್ಯರ ಪ್ರಿಯಶಿಷ್ಯನೆಂದು ಹೆಮ್ಮೆ ಪಡುವ ಜೋಳದರಾಶಿ ಕೆ ದೊಡ್ಡನಗೌಡರವರು - ಕ್ರಾಂತಿಪುರುಷ ಬಸವಣ್ಣ- ಯನ್ನುವ ನಾಟಕನ್ನ ಬರಿಯಲು ಉತ್ತಮ ವಸ್ತುಸಾಮಗ್ರಿಯು, ಆಶೀರ್ವಾದ ಕೊಟ್ಟು ತಮ್ಮಗುರುಗಳು ನಾಮನಿರ್ದೇಶನ ಮಾಡಿದರಿಂದನೇ ಬರಿಯುವದಾಯಿತೆಂದು ವಿನಯಪೂರ್ವಕವಾಗಿ ತಮ್ಮಗುರುಗಳಿಗೇ ಅಂಕಿತಮಾಡಿದ್ದಾರೆ.
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಮಾರ್ಗದರ್ಶನದಲ್ಲಿ ಶಿವಶರಣರ ಸಮೂಹದೊಂದಿಗೆ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯರಂಗಗಳಲ್ಲಿ ಕ್ರಾಂತಿಕಾರಕ ಸುಧಾರಣೆ ಮಾಡಿದವರು;
ಆತ್ಮಜ್ಞಾನಕ್ಕೆ ಜಾತಿ, ಲಿಂಗ,ವರ್ಣ,ವಂಶಭೇದವಿಲ್ಲದೆ ಎಲ್ಲರೂ ಶಿವಸಾಮೀಪ್ಯ ಹೊಂದಲು ಆತ್ಮದರ್ಶನ ಪಡೆಯಲು ಅರ್ಹ
ರೆಂದು ಹೇಳಿದ್ದವರು;
ಕಾಯಕವೇ ಕೈಲಾಸವೆಂದು ಸಾರಿ, ಜಟಿಲವಾಗಿರುವ ಆರ್ಥಿಕ ಸಮಸ್ಯಯನ್ನು ಪರಿಷ್ಕಾರ ಮಾಡಬೇಕೆಂದು ಮಾರ್ಗದರ್ಶಿ
ಯಾಗಿನಿಂತವರು;
ಸಾಮಾಜಿಕ,ಧಾರ್ಮಿಕ , ಆರ್ಥಿಕ, ರಾಜಕೀಯ ರಂಗದಲ್ಲಿ ನೀತಿಯೇ ಪ್ರಧಾನವೆಂದು, ನೀತಿಯೇ ದೇವರೆಂದು ಸಾರಿದವರು ಕ್ರಾಂತಿ ಪುರುಷ
ಬಸವಣ್ಣರಬಗ್ಗೆ ಈ ನಾಟಕವು ಬರದು ಪ್ರದರ್ಶನ ನೀಡಿದ್ದಾಗಿದೆ..
ಮೂರು ಅಂಕಗಳ ಈ ನಾಟಕ ದಲ್ಲಿ
ಧರ್ಮಾನುಯಾಯಿಗಳಿಗೆಲ್ಲರಿಗೂ ಗುಡಿಪ್ರವೆಶ, ರೈತರ ಕೂಲಿಕಾರ ಸಮಸ್ಯೆ ಮುಂತಾದವು ತೋರಿಸುವದಲ್ಲದೆ
ರಾಜಧರ್ಮವು, ರಾಷ್ಟ್ರಧರ್ಮವಾಗಿ ಪ್ರಜಾಪಾಲನೆ ಯಲ್ಲಿ ಶಾಂತಿ ಪ್ರೇಮದಿಂದ ಕೂಡಿಬಾಳುವಂತೆ ವ್ಯವಸ್ಥಿತಗೊಳಿಸುವದು ತೋರಿಸುತ್ತಾರೆ,
ಎರಡನೇ ಅಂಕದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಧರ್ಮಸಾಧನೆಗೆ ನೆರವಾಗಿಬಾಳಬೇಕೆಂಬುವವದೂ ನಿರೂಪಣೆ ಮಾಡುತ್ತಾರೆ.
ಮೂರನೇ ಅಂಕದಲ್ಲಿ ತಾನು ಕಟ್ಟಿದ ಸಮಾಜವೇ ತನಗೆ ಎದುರಾದಾಗ, ಬಸವಣ್ಣನವರ ವಿಷಾದ ಪ್ರಸ್ಥಾನವು ಚಿತ್ರಿಸಲಾಗಿದೆ. ಇದರಲ್ಲಿ
ನಡೆಯುವ ವಾದಪ್ರತಿವಾದಗಳು ಈ ನಾಟಕಕ್ಕೆ ಕಳಸಪ್ರಾಯವಾಗಿವೆ ಯಂದು ಓದುಗರು ಭಾವಿಸುವದುಂಟು.
ಶಿವಭಕ್ತ ನಿದ್ದ ಠಾವೇ ದೇವಲೋಕ
ಭಕ್ತಸಂಗಣವೇ ವಾರಣಾಸಿ
ಕಾಯಕವೇ ಕೈಲಾಸ ಇದು ಸತ್ಯ
ಕೂಡಲ ಸಂಗಮದೇವಾ.
ಸತ್ಯಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತವಿಚ್ಛಂದವಾಗದಿರಬೇಕು
ನೇಮದ ನಿತ್ಯಕೂಲಿ ಯೆಂದಿನ
ನಿತ್ಯನೇಮದಲ್ಲಿ ಸಂದಿರಬೇಕು
ನೇಮದ ಕೂಲಿಯಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಪಡೆದರೆ
ತಾ ಮಾಡುವ ಸೇವೆ ನಷ್ಟವಯ್ಯಾ.
ಕಾಯಕದಲ್ಲಿ ನಿರತನಾದರೆ
ಗುರುದರುಶನ ವಾದರೂ ಮರೆಯಬೇಕು.
ಲಿಂಗ ಪೂಜ ಯಾದರೂ ಮರೆಯಬೇಕು.
ಪದ್ಯ
ಮಾನಿತ ಮಾನವಾಧಿಪನ ಮನ್ನಣಿಗಂ ಮನ ಸೋತು ಸಂತತಂ
ಮಾಣದೆ ರಾಜನಿಷ್ಠೆಯಲಿ ಮುನ್ನಡೆದಾ ಘನರಾಜ ಸೇವಕಂ
ತಾ ನರನಾಥ ನಾಜ್ಞೆಯನು ಮೀರಿ ಸ್ವತಂತ್ರತೆ ಯಾಂತು ವರ್ತಿಸಲ್
ಮಾನ್ಯವೆ? ರಾಜಸೇವಕನ ಧರ್ಮವೆ? ಪೇಳ್ ವರ ಮಂತ್ರಿ ಶೇಖರಾ॥
ಸ್ವಾತಂತ್ರ್ಯವು ಪ್ರಜಾಕ್ಷೇಮಕ್ಕಾಗಿ ವಿನಿಯೋಗವಾಗಬೇಕು. ರಾಜಸೇವಕನು ರಾಷ್ಟ್ರಸೇವಕನಾಗಬೇಕು. ರಾಜಸೇವಕನಾಗಿ ಪ್ರಜಾಕಂಟಕ ನಾಗಬಾರದು.
ಈ ರೀತಿ ಪ್ರಬಲ ವಾದ ಸಂಭಾಷಣೆಗಳಿವೆ.
ಆದರೇ ಯಾವ ತತ್ತ್ವನ್ನು ಯಾವ ಸತ್ಯವನ್ನು ಯಾವ ಪ್ರೇಮವನ್ನು ವಿಶ್ವದ ಮಾನವರಹೃದಯದಲ್ಲಿ ನಾಟಬೇಕೆಂದೆಣಿಸಿದ್ದನೋ ಆ ನೆನಸೆ ಕನಸಾಯಿತಂತ ತೆಳಿದಮೇಲೆ ,ತನ್ನ ತತ್ತ್ವವೇ ತನಗೆದುರು ನಿಂತಮೇಲೆ ತನ್ನ ಲೋಪವೇನೆಂಬುವದು ಸಂಗಯ್ಯ ನಿಂದ ತೆಳಿದುಕೊಳ್ಳುವೆನು, ಮತ್ತೊಂದು ಜನ್ಮವೆತ್ತಿ ಬರುವೆನು ಯನ್ನುತ್ತಾ ವಚನ ಹೇಳುತ್ತಾ ಹೋಗುವ ವಿಷಾದಾಂತವೂ;
ಬಸವಣ್ಣನು ಅಂದಿನ ಕೋಲಾಹಲಕ್ಕೆ ರೋಸಿ ಸಂಗಮನಲ್ಲಿ ಮರೆಯಾದರೂ, ಆ ಮಹಾತ್ಮರ ಸಂದೇಶ ನಾಡಿನಲ್ಲಿ ಸಾರುವ ಕಾರ್ಯವು ಕೈಗೆತ್ತಿಕೊಂಡು ಸಂಗಮನಾಥನಲ್ಲಿ ಐಕ್ಯನಾದ ಬಸವಣ್ಣ ನವರ ದರ್ಶನ, ಆಶೀರ್ವಾದ ಪಡೆದು, ಮಹಾದೇವಿ ಅಕ್ಕನ ವಚನಗಳನ್ನು ಸಾರುವ ಪಾತ್ರೆಗಳಿಂದ ಶುಭಾಂತವೂ
(ನಾಟಕ ಪ್ರದರ್ಶ್ನನಕಾರರ ಅಭಿಪ್ರಾಯವಂತೆ)
ಎರಡು ರಕ ಮುಕ್ತಾಯವು ನೀಡಿದ್ದು ನಾಟಕಕಾರರ ಪ್ರತಿಭೆ ಯನ್ನುವದು ಸತ್ಯ.
ದೊಡ್ಡನಗೌಡ ರವರ ಪ್ರತಿಭಾ ವಿಶೇಷಗಳಿಂದ ಅವರೊಬ್ಬ ಶ್ರೇಷ್ಠ ನಟ, ಉತ್ತಮಸಾಹಿತಿ, ಎಂದು ನಿರೂಪಿಸುತ್ತದೆ.
ನಾಟಕದಲ್ಲಿ ಬಳಸಿರುವ ತಂತ್ರಜ್ಞಾನ ಅವರ ನಾಟಕಾಭಿನಯದ ಅನುಭವವನ್ನು ಒಳಗೊಂಡಿದೆ.ಅತ್ಯಂತ ಕುತೂಹಲಕಾರಿಯಾಗಿ, ವಿಚಾರಪೂರಿತವಾಗಿ, ಗಂಭೀರವಾಗಿದ್ದೂ
ಸರಳವಾಗಿರುವ ಸಂಭಾಷಣೆ ಐತಿಹಾಸಿಕ ತಾತ್ವಿಕ ನಾಟಗಳು ಹೇಗಿರಬೇಕು ಅಂಬುದಕ್ಕೆ ನಿದರ್ಶನವಾಗಿದೆ.
ಈ ನಾಟಕವು ಈಗಾಗಲೆ ಹಲವಾರು ಕಡೆಗಳಲ್ಲಿ ಶ್ರೀ ಗೌಡರ ದಿಗ್ದರ್ಶನದಲ್ಲಿ ಪ್ರದರ್ಶನವಾಗಿ ಮೆಚ್ಚಿಕೆ ಗಳನ್ನು ಪಡೆದಿದೆ ಯಂದು ಮುನ್ನುಡಿ ಬರದಿದ್ದ ಹೆಚ್ ಚೆನ್ನವೀರಗೌಡ
ರವರು ತೆಳಸಿದ್ದಾರೆ.
ಇದಕ್ಕೆ ತೆಲುಗು ಅನುವಾದವೂ ಜೋಳದರಾಶಿ ಜಿ ಚಂದ್ರಶೇಖರರೆಡ್ಡಿ ಅವರು ಬಹುಳಷ್ಟು ಸರಳವಾಗಿ ಸುಂದರವಾಗಿ ಮಾಡಿದ್ದಾರೆ.
ಇನ್ನೊಂದು ವಿಶೇಷವೇನಂದರೆ ತೆಲುಗು ವಿಶ್ವವಿದ್ಯಾಲಯ ಪ್ರಚುರಿಸಿದ್ದ ಈ ಪುಸ್ತಕದಲ್ಲಿ ಕನ್ನಡ ನಿಂದ ತೆಲುಗು ಭಾಷಾಂತರ ದೃಶ್ಯಗಳು ಪಕ್ಕೆದ ಪುಟಗಳಲ್ಲೇ ಕೊಟ್ಟಿರುವದು ಶೋಧಕರಿಗೆ ಭಾಳ ಉಪಯುಕ್ತವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.