ಈ ಬ್ಲಾಗ್ ಅನ್ನು ಹುಡುಕಿ

ಜಗನ್ನಾಥ ಪುರಿ, ಕೋಣಾರ್ಕ್.

                        ಒರಿಸ್ಸಾ ರಾಜ್ಯದ ಪ್ರಸಿದ್ಧ ಕ್ಷೇತ್ರ ಜಗನ್ನಾಥ ಪುರಿ. ಅದನ್ನೇ ಪೂರಿ ಅಂಥ ಸಾಧಾರಣವಾಗಿ ಕರೆಯುತ್ತಾರೆ. ಭುವನೇಶ್ವರ್ ಗೆ ಸಮೀಪದಲ್ಲಿರುವ ಈ ಕ್ಷೇತ್ರಕ್ಕೆ ಹತ್ತಿರವಾದ ರೈಲ್ವೇ ನಿಲ್ದಾಣ ಖುರ್ದಾ ರೋಡ್.

                ಈ ಕ್ಷೇತ್ರದ ದೇವರು ಶ್ರೀ ಜಗನ್ನಾಥರು. ಗರ್ಭಗುಡಿಯಲ್ಲಿ ಜಗನ್ನಾಥರು ಸುಭದ್ರ ಮತ್ತು ಬಲಭದ್ರನ ಸಮೇತರಾಗಿರುವರು. ಬೃಹತ್ ಪರಿಮಾಣದ ಈ ಗುಡಿ ಯಲ್ಲಿರುವ ದೇವರ ದಾರುಶಿಲ್ಪರೂಪ ಎಲ್ಲರಿಗು ಆಶ್ಚರ್ಯ ಕೊಡುವಂಥಾದ್ದು. ಪ್ರತಿ ಹನ್ನೆರಡು ವರ್ಷಕ್ಕೆ ಒಮ್ಮೆ ಒಂದು ಪ್ರತ್ಯೇಕ ದಾರು/ಕಟ್ಟಿಗೆ  ಇಂದ ಈ ಶಿಲ್ಪ ನಿರ್ಮಾಣ ವಾಗುವುದುಂಟು.

           ಪ್ರತಿ ವರ್ಷ ಆಷಾಢಮಾಸದಲ್ಲಿ ನಡೆಯುವ ಜಗನ್ನಾಥ ರಥೋತ್ಸವ ಜಗತ್ಪ್ರಸಿದ್ಧವಾದದ್ದು. ಪ್ರತಿ ವರ್ಷ ಹೊಸ ತೇರುಗಳು ಮೂರು (ಜಗನ್ನಾಥ, ಬಲಭದ್ರ, ಸುಭದ್ರ) ತಯಾರಾಗುತ್ತವೆ. ಆ ದಾರು ರಥಗಳನ್ನು ಬಣ್ಣಬಣ್ಣದ ಬಟ್ಟೆಗಳಿಂದ ಅಲಂಕಾರವೂ ಮಾಡುತ್ತಾರೆ. ರಥೋತ್ಸವ ಮುಗುದುನಂತರ ಆ ದಾರು ಗಳನ್ನ ಒಂದು ತುಂಡಾದರೂ auction ನಲ್ಲಿ ಕೊಣುಕೊಂಡು ತಮ್ಮ ತಮ್ಮ ಮನೆಯ ನಿರ್ಮಾಣದಲ್ಲಿ ಬಳಸುವದು ಅತ್ಯಂತ ಶುಭಕಾರಿ ಅಂತ ಅಲ್ಲಿಯ ಜನರು ನಂಬುವದುಂಟು.


         ರಥೋತ್ಸವ ಆರಂಭದಲ್ಲಿ ಅಲ್ಲಿಯ ರಾಜಕುಟುಂಬೀಕರು ಬಂದು ತೇರು ಗಳ ಮುಂದೆ ಇರುವ ಥಳವನ್ನು ಸ್ವರ್ಣ ಹಿಡಿಕಿ ಉಳ್ಳ ಪೊರಿಕಿ ಯಿಂದ ಬೊಳಿಯುತ್ತಾರೆ.

                ಈ ಕ್ಷೇತ್ರಕ್ಕೆ 35 ಕಿ.ಮೀ. ದೂರದಲ್ಲಿರುವ ಕೋಣಾರ್ಕ ಸೂರ್ಯದೇವಸ್ಥಾನವೂ ವಿಶೇಷವಾದದ್ದು. ಅತ್ಯದ್ಭುತ ವಾದ ಅಲ್ಲಿಯ ನಿರ್ಮಾಣ ಅಲ್ಲಿಯ ರಥಾಕಾರ ದಲ್ಲಿರುವ ದೇವಸ್ಥಾನ, ಅದರ ಚಕ್ರಗಳು ಮುಂತಾದ ಶಿಲ್ಪನಿರ್ಮಾಣಗಳು ಅದ್ಭುತ ವಾಗಿರುತ್ತವೆ. ಪರದೆಶಸ್ಥರ ದುಷ್ಟತನ ದಿಂದ ಈಗ ಅಲ್ಲಿ ಸೂರ್ಯದೇವರ ಮೂರ್ತಿಯೂ, ವಳಗೆ ಪ್ರವೇಶವೂ ಇಲ್ಲದಿದ್ದರೂ ವರನೋಟಕ್ಕೇ ಅಲ್ಲಿ ಹೋಗಲೇಬೇಕು.



            ಪೂರಿ ಯಲ್ಲಿ ಸಾಗರತೀರವೂ ತುಂಬಾ ಚೆನ್ನಾಗಿರುತ್ತದೆ. ಅಲ್ಲಿ ಸೂರ್ಯೋದಯವು, ಸೂರ್ಯಾಸ್ತಮಯವು ನೋಡುವದು ಕಣ್ಣಿಗೆ ಆನಂದ ನೀಡುತ್ತದೆ.

  ಇಲ್ಲಿರುವವು ಕೋಣಾರ್ಕ್ ಫೋಟೋಗಳು ಮಾತ್ರ.

------------ಲಕ್ಷ್ಮೀದೇವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.