ಬೆಳದಿಂಗಳಲ್ಲಿ ಮಳೆ ಬಂದರೆ....
ಚಂದ್ರಿಕಾತರಂಗಗಳಲ್ಲೆ ಮೈ ತೊಳೆದರೆ....
ಎಲೆಯ ಕಣ್ಣುಗಳಿಂದ ಆನಂದ ಭಾಷ್ಪವೋ.....ಅದೇನೋ....!
ಮಲೆ ಯಿಂದ ಕೆಳಗಿಳಿವ ನೀರನು ಕಂಡರೆ...
ಕಲರವ ವೇನೆಂದು ಕೇಳಲಿದ್ದಾಗ.....
ಬ್ರಹ್ಮಾನಂದದ ಸುರಿಮಳೆಯೆಂಬುವುದಿದೇ
ಎನ್ನುವ ಸತ್ಯವ ಕೇಳಿ ತಿಳಿದಾಗ
ಸಿಡಿದ ಕಿರುಭಾಷ್ಪವೊಂದಿಗೆ ಕಣ್ಣು ತುಂಬಿದರೇ.....ಅದೇನೋ....!
ಕಡಲಲಿ ಲವಣವ ತೆಗೆದು
ಅಮೃತ ಸುರಿಸುವ ಮುಗಿಲನು ಕಂಡಾಗ.....
ಮನದಲಿ ತುಂಬುವ
ಸಂಭ್ರಮದಲಿ ತುಳುಕಾಡುವ
ಆಹ್ಲಾದ ಗಂಗೋತ್ರಿ ಯ ರೂಪವೋ....ಅದೇನೋ....!!!!!!!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.