ಈ ಬ್ಲಾಗ್ ಅನ್ನು ಹುಡುಕಿ

ಓದುಸುವದು ಅಂದರೆ.....

                ಓದು ಹೇಳುವದು ಅಂದರೆ ಮಕ್ಕಳಿಗೆ ಓದು ಅಂದರೆ ಪ್ರೀತಿ ಮೂಡಸಬೇಕು. ಪರೀಕ್ಷ ಅಂದರೆ ಭೀತಿ ಗೊಳ್ಳಸಬಾರದು. ಎಷ್ಟು ಓಪಿಕೆ ಇಂದ ಮಕ್ಕಳ ಸಂದೇಹ ನಿವೃತ್ತಿ ಮಾಡುತ್ತೀವೋ ಅಷ್ಟು ಹುಡಗರಿಗೆ ಓದು ಅಂದರೆ ಆಸಕ್ತಿ ಹೆಚ್ಚುತದೆ. ಸಣ್ಣ ವಯಸ್ಸುನಿಂದೇ ಸಾಲಿ ವಳಗಿನ ಗುರುಗಳು, ಮನಿ ವಳಗಿನ ತಂದೆ/ತಾಯಿ ಯಾರೇ ಆಗಲಿ ಸ್ವತಃ ಆಸಕ್ತಿ ನೋಡಸಬೇಕು. ಆಸಕ್ತಿ ನಮಗೇ ಇಲ್ಲದಿದ್ದರೆ ಮಕ್ಕಳಿಗೆ ಎಲ್ಲಿಂದ ಬರುವದು?
         ಇಲ್ಲಿಗೇ ಯಾವುದೇ ಕೆಲಸ ಸಿಗದವರು ಟೀಚರ್ ಉದ್ಯೋಗಕ್ಕೆ ಸೇರುವದು, ಕೈಯಲ್ಲಿ ರೊಕ್ಕ ಇದ್ದವರು ಸಾಲಿ ಮೊದಲಿಡುವದು, ಮನೆ ಯಲ್ಲೇ ಇದ್ದು ತೋಚದೆ ಟೀಚರ್ ಕೆಲಸ ಸೇರುವವರು, ಬಿ ಯೆಡ್ ಡಿಗ್ರೀ ರೊಕ್ಕ ಕೊಟ್ಟು ಕೊಂಡಿದ್ದವರು, ನಿಜವಾಗಿದ ಡಿಗ್ರೀ ಕೈಯಲ್ಲಿ ಇದ್ದರೂ ನಿಜವಾದ ಆಸಕ್ತಿ ಇಲ್ಲದವರು ಟೀಚರ್ ಆಗಿ ಎಷ್ಟೊಂದು ಕಡೆ ಇದ್ದಾರೋ
ಎಲ್ಲರಿಗೆ ಗೊತ್ತಿದ್ದ ವಿಷಯ. (ಎಲ್ಲರು ಹೀಗೆ ಅಂತ ಹೇಳಲ್ಲ)
           ಮನಿಯಲ್ಲಿ ಇರುವ ದೊಡ್ಡವರು ಅವರವರ ಕೆಲಸ ದಲ್ಲೇ ವ್ಯಸ್ತರಾಗಿರುತ್ತಾರೆ. ಇಲ್ಲ ಫೋನ್ ಚಾಟಿಂಗ್, ಫೇಸ್ ಬುಕ್, ಟೀವಿ ಅಂತ ಮುಳುಗಿದ್ದು, ಮಕ್ಕಳ ಓದುಕ್ಕಾಗಿ ಹತ್ತಿರ ಕೂಡಲಿಲ್ಲ ಅಂದರೆ ಹೇಗೆ? ಕೆಲವು ಕಡೆ ಮಕ್ಕಳೇ ಕರಿಯುತ್ತಿದ್ದರೂ ಅಮ್ಮ, ಅಪ್ಪ ಮಕ್ಕಳ ಓದುಗೆ ಸಹಾಯ ಮಾಡುವದಿಲ್ಲ. ಈ ರೀತಿ ಇದ್ದು ಮಕ್ಕಳು ವೃದ್ಧಿ ಸಾಧಿಸಲಿಲ್ಲ ಅಂತ ಅವರಮೇಲೆ ಆಗ್ರಹಿಸುವದು ತಪ್ಪು.
        ನಮ್ಮ ಮಕ್ಕಳು ಎಷ್ಟಾದರೂ ತೆಳವರಿಕೆ ಇದ್ದವರಾಗಿ ಇರಬಹದು. ಆದರೆ ದಿನದಿನವೂ ಸಾಲಿ ವಳಗೆ ಏನು ಹೆಳಿದ್ದಾರೆ, ಏನು ಓದಲು, ಬರಿಯಲು ಹೇಳಿದ್ದಾರೆ ಅಂತ ನೋಡುವಷ್ಟು ಓಪಿಗಿ, ಸಮಯ, ಆಸಕ್ತಿ ದೊಡ್ಡವರಿಗೆ ಇರಬೇಕು. ಆಗಲೇ ವಳ್ಳೆಯ ವಿದ್ಯಾರ್ಥಿಗಳು ತಯಾರಾಗುತ್ತಾರೆ.
      ಸಾಲಿಯಲ್ಲಿ ಕೂಡಾ ಒಂದೊಂದು ತಿಂಗಳಲ್ಲಿ ಏನು ಸಿಲಬಸ್ ಮುಗಿಸಬೇಕು ಅಂತ ನಿಯಮ ನಿಬಂಧನೆ ನೋಡಿಸಿ ಗುರುಗಳನ್ನ ಹೆದರಿಸಿ ಕೆಲಸ ಮುಗಿಸುವ ಪ್ರಧಾನೋಪಾಧ್ಯಾಯರೂ ಸಹಿತ ಅವರ ಕರ್ತವ್ಯವೇನಂತ್ ತೆಳಿಯಬೇಕು.
ವಳ್ಳೆಯವಿದ್ಯಾರ್ಥಿ ವಳ್ಳೆಯ ದೇಶ ನಿರ್ಮಿಸಲಿಕ್ಕೆ ತಕ್ಷಣ ಅವಶ್ಯಕತೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.